SCROLL NEWS

SCHOOL WIKI >>> ENTER ***INCOME TAX-DOWNLOAD FORM 16 from TRACES SITE >> TUTORIAL in KANNADA****TENTH PAY REVISION/ PENSION REVISION NOTIFICATIONS AND FORMS** GPF CREDIT SLIP- -DOWNLOAD>> LINK>HEALTH AND PHYSICAL EDN- ACTIVITY BOOK- STD V,VI,VII,VIII: LINK

Link Tabs2

SSLC RESULTSSLC 2016-17 iExaMS VIDYA SAMUNNATHI SCHOLARSHIP PF CREDIT SLIPSCHOOL WIKI


6th WORKING DAY RPT-ONLINE TEXTBOOK DATA 2016-17TEXTBOOK INDENTING 2017-18 UPDATE AADHAR DATA


TENTH EQUIVALENCY-2016TEACHER TEXTS-2016SSLC QUESTION POOL

FLASH NEWS

TEACHER TEXTS-2015* TEXTBOOKS-2015*STD VIII - SAMPLE QUESTIONS-ALL SUBJECTS>>>VIEW HERE***NEW DIGITAL COLLABORATIVE TEXTBOOKS 2016-VIEW HERE***WIFS DATA UPLOAD***

KANNADA

ಪುಟ್ಟನ ಕನಸು

ಕನಸನೊಂದು ಕಂಡನಮ್ಮ
ಮನೆಯ ಪುಟ್ಟನು
ಕನಸಿನಲ್ಲಿ ಬಂದನವನ
ಗೆಳೆಯ ಕಿಟ್ಟನು
ಪುಟ್ಟನೆಂದ ಕಿಟ್ಟ ನೀನು
ಏನು ಮಾಡುವೆ
ಕಿಟ್ಟನೆಂದ ನಾನು ಹೀಗೆ
ಹೀಗೆ ಓಡುವೆ
ಓಡುತಿರುವ ಕಿಟ್ಟನನ್ನು
ಹಿಡಿಯಲೆಳಸುತ
ಪುಟ್ಟ ಸುತ್ತು ಸುತ್ತು
ದಾರಿ ಬಳಸುತ
ವೇಗವಾಗಿ ಓಡುವಾಗ
ಜಾರಿ ಬಿದ್ದನು
ಅಮ್ಮಾ ನೋವು ಎಂದು
ನಿದ್ದೆಯಿಂದ ಎದ್ದನು
ಕಣ್ಣು ಬಿಡಲು ಎದುರು
ಅಮ್ಮನನ್ನು ಕಂಡನು
ಕನಸು ಎಂದು ಪುಟ್ಟ
ನಾಚಿಕೊಂಡನು.

ಚಿತ್ತರಂಜನ್ ಕೆ.10ಎ ತರಗತಿ

ಮನೆ

ಮನೆಯೇ ಸ್ವರ್ಗ ಸುಖ
ಮನಸೇ ನನ್ನ ಸುಖ
ಮನೆಯು ಹೇಗಿರಲಿ
ಮನವು ನಗುವಿನಿಂದಿರಲಿ
ನನ್ನ ಮನೆಯು ಸ್ವರ್ಗವು||
ಮವೆಯು ಪುಟ್ಟದಿರಲಿ
ಹಂಚಿನ ಮನೆಯಾಗಿರಲಿ
ಸೋಗೆ ಆವರಿಸಿರಲಿ
ಬಣ್ಣವು ಇಲ್ಲದಿರಲಿ
ನನ್ನ ಮನೆಯು ಸ್ವರ್ಗವು||

ನಿಶ್ಚಿತಾ ಪಿ.ಸಿ.10 ಎ ತರಗತಿ

 

ತರಕಾರಿ ತೋಟ


ನಮ್ಮ ಶಾಲೆ ಹಿತ್ತಿಲಲ್ಲಿ
ಇರುವುದೊಂದು ತೋಟವು
ತೊಂಡೆ, ಬಾಳೆ, ಬದನೆ, ಸೌತೆ
ವಿಧ ವಿಧ ತರಕಾರಿಯು

ಬೇಗ ಬಂದು ನೀರು ಸುರಿದು
ಗಿಡಗಳನ್ನು ಬೆಳೆದೆವು
ಗಿಡವು ಬೆಳೆದು ದೊಡ್ಡದಾಗಿ
ಫಸಲನ್ನು ಕೊಟ್ಟಿತು

ಅದನ್ನು ನೋಡಿ ಮಕ್ಕಳೆಲ್ಲ
ಸಂತಸದಿ ಕುಣಿದರು.

ಅರ್ಪಿತಾ M.A.
10 ಎ ತರಗತಿ  

ಬಾನ ಪಯಣ

ಚಿವ್ ಚಿವ್ ಎನ್ನುವ ಹಕ್ಕಿಮರಿ
ತೇಲುತ ಹಕ್ಕಿಯು ಬಾನಲಿ ಹಾರಿ
ಚಿಲಿಪಿಲಿಗುಟ್ಟುತ ಜಗವನೆ ಮೀರಿ
ಕರೆವೆನು ನಿನ್ನ ನಾ ನಿಲ್ಲಿಗೆ ಕೋರಿ
ನಿನ್ನಯ ಕೊಕ್ಕು ರಕ್ತವ ಬೀರಿ
ಹಸಿರು ಪುಕ್ಕದ ನನ್ನಯ ನಾರಿ
ಹಾಡುತ ಕುಣಿಯುತ ನಲಿಯುತ ಸಾರಿ
ಬಾನಲಿ ಹಾರಿತು ಚಂದ್ರ ಚಕೋರಿ.

ಕೀರ್ತಿಯ ದಾರಿ
ಪ್ರಕೃತಿ ಎಷ್ಟು ಮನೋಹರ
ಬೇರೆ ಇಲ್ಲ ಇಷ್ಟು ಸುಂದರ
ಚಿಲಿಪಿಲಿ ಹಾಡುವ ಹಕ್ಕಿಯ ಸಾಲು
ಜೊತೆಗೇ ಓಡುವ ಮಾನವ ಬಾಳು
ಪರಿಸರ ನಾಶವ ಮಾಡುತಲಿಹನು
ಕಟ್ಟಡವನ್ನು ಕಟ್ಟುತಲಿಹನು
ಮಾಳಿಗಯಂತೆ ಮಾನವ ಕೂಡ
ತಲುಪಿಹನಿಂದು ಗಗನವ ಮೀರಿ
ಭೂಮಿಯನಗೆದು ಬಗೆದೂ ಇಂದು
ಮುಟ್ಟಿಹ ಕೊಳವೆಯ ಬಾವಿಯನಿಳಿದು
ಪ್ರಕೃತಿಯ ನಾಶವು ನಮ್ಮಯ ನಾಶವು
ಮಾನವನಿಂದು ಪಡೆದಿಹ ಜಸವು.

ಹಣ್ಣಿನ ಮಹಿಮೆ

ತರತರ ತರತರ ಹಣ್ಣುಗಳು
ರುಚಿರುಚಿಯಾದ ಹಣ್ಣುಗಳು|
ಪರಿಮಳ ಬೀರುವ ಹಣ್ಣುಗಳು
ತಿನ್ನಲು ಸಿಹಿ ಸಿಹಿ ಹಣ್ಣುಗಳು||

ಮಾವಿನ ಹಣ್ಣು, ಹಲಸಿನ ಹಣ್ಣು
ಹಳದಿ ಬಣ್ಣದ ಬಾಳೆಯ ಹಣ್ಣು|
ಸೇಬು ಕಿತ್ತಳೆ ನೇರಳೆ ಹಣ್ಣು
ಚಿಕ್ಕು ಮುಸುಂಬಿಯ ಮೇಲೆಯೆ ಕಣ್ಣು ||
ದಿನವೂ ಹಣ್ಣನು ತಿನ್ನುತಲಿದ್ದರೆ
ಬಾರದು ನಮಗೆ ಆಪತ್ತು|
ತರತರ ಹಣ್ಣನು ಬೆಳೆಯಿರಿ ತಿನ್ನಿರಿ
ದೇಹಾರೋಗ್ಯವೆ ಸಂಪತ್ತು||


ಚುಟುಕುಗಳು

ಬೆಳಗ್ಗೆ ಬೇಗನೆ ಎದ್ದನು ಪುಟ್ಟ
ಸರಸರ ಅವಸರ ಪಟ್ಟ
ಸ್ನಾನವ ಮುಗಿಸಿ ಅಂಗಿಯ ತೊಟ್ಟ
ಚಡ್ಡಿಯ ಮರೆತು ಶಾಲೆಗೆ ಹೊರಟ.

ಆಚೆಮನೆಯ ಬಾನು
ಈಚೆಮನೆಯ ಸೋನು
ಬಾನು ಸೋನು ಸೇರಿಕೊಂಡು
ತಂದರು ಬಂಗುಡೆ ಮೀನು.


ಶ್ರೀಜಾ ರೈ.M 10 ಎ ತರಗತಿ
ತೃಪ್ತಿಯೇ ಇಲ್ಲ
ಕಾಲ ಕಾಲಕ್ಕೆ ಮಳೆಯನು ಸುರಿಸಿ
ದಣಿವೇ ಆಗದು ಮೋಡಕ್ಕೆ

ರಾಶಿ ರಾಶಿ ಫಲ ನೀಡಿದರು
ದಣಿವೇ ಆಗದು ವೃಕ್ಷಕ್ಕೆ

ಗಿಡಮರ ಕಡಲು ಜೀವಗಳ
ಹೊತ್ತು ಹೊರೆಯಾಗಲಿಲ್ಲ ನೆಲಕ್ಕೆ

ಮಾನವನಿಗೆ ತೃಪ್ತಿಯೆ ಇಲ್ಲ
ಎಷ್ಟೇ ತುಂಬಿದರು ಸ್ವಾರ್ಥಕ್ಕೆ.

ಝರಿಯೆಡೆಗೆ ನೀರು

ಮೂಡಣ ಕಡೆಯಲಿ
ಮೋಡವು ಕವಿಯಲು
ಗುಡುಗುಗಳು ಗುಡುಗಾಡಿದವು
ಗಾಳಿಯು ಬೀಸಿತು ಬಡಬಡನೆ
ಕತ್ತಲು ಕವಿಯಿತು ಬಲುಬೇಗನೆ
ಮೋಡವು ಒಡೆದು ಮಳೆಯನು ಸುರಿಸಲು
ಹರಿಯಿತು ನೀರು ಝರಿಯೆಡೆಗೆ

ಪುಗ್ಗೆಯ ಮಾವ

ಬಂದನು ಬಂದನು ಪುಗ್ಗೆಯ ಮಾವ
ತಂದನು ತಂದನು ಬಣ್ಣದ ಪುಗ್ಗೆಯ
ಪುಟ್ಟು ಕಿಟ್ಟು ಸಫಿಯಾ ಸುಫಲಾ
ಬೇಗನೆ ಬನ್ನಿ ಬೇಗನೆ ಬನ್ನಿ
ಒಳಗಿಂದಲೆ ಮಕ್ಕಳು ಬಂದು
ಬೇಗನೆ ಹೊರ ಅಂಗಳಕಿಳಿದು
ಪುಗ್ಗೆಯು ಇದೆಯೇ ಎನ್ನುವುದುಂಟು
ಪುಗ್ಗೆಯ ತಂದೆನು ಪುಗ್ಗೆಯನು
ಪುಗ್ಗೆಯ ಮಾರುವ ಅಣ್ಣನು ನಾನು
ಮುದ್ದು ಮಕ್ಕಳ ಗೆಳೆಯನು ನಾನು
ಪುಗ್ಗೆಯು ನಿಮಗೆ ನಾಣ್ಯವು ನನಗೆ
ಪುಗ್ಗೆಯ ತಂದೆನು ಪುಗ್ಗೆಯನು.

ಗೀತಾಂಜಲಿ M. 10 ಎ ತರಗತಿ

ವಿಸ್ಮಯ ಲೋಕ                   

ಮುಸ್ಸಂಜೆ ವೇಳೆಯಲಿ
ಗಗನದಿ ಚಂದಿರನು
ನದಿಗಿಳಿದು ಮೀಯುತ್ತಿರಲು

ಬೀಸಿ ಬಂದ ತಂಗಾಳಿ
ಪಿಸುಗುಟ್ಟುತ್ತಿದ್ದು
ಕಪ್ಪೆ ಹಾಡಿ ಕುಣಿಯುತ್ತಿರಲು

ನದೀ ತೀರದಿ
ಮರಗಳು ಬಾಗಿ
ದೀಪದಿಂದ ಮಿಂಚುಹುಳ ಅಲಂಕರಿಸಿರಲು

ಬಾವಲಿ ಹಾರುತ್ತಿದ್ದು
ವಿಮಾನದಂತೆ ಕಾಣಿಸಿ
ಬಾನೆತ್ತರಕೆ ಮುತ್ತಿಕ್ಕುತ್ತಿರಲು

ಮುಗಿಲಿನಲಿ ಕಪ್ಪು ಚುಕ್ಕಿ
ಏನನ್ನೋ ಕಾಣಿಸುತ್ತಿದ್ದು
ಸೌಂದರ್ಯವ ಸವಿಯುತ್ತಿರಲು.

ಗೀತಾಂಜಲಿ. M
10ಎ ತರಗತಿ


ಮಂಜನೀವ ಹೂವು

ಮುಂಜಾನೆಯ ನಸುಕಿನಲಿ
ಮಂಜನೀವ ಹೂವೆ
ನಿನ್ನೊಲವಿನ ಕಂಪ ಸೂಸಿ
ಮನಸೆಳೆವ ಹೂವೆ
ಎದೆಯಲ್ಲಿ ಜೇನು ತುಂಬಿ
ಶೋಭಿಸುವ ಹೂವೆ
ನಸುನಗುತಿಹ ಮಂಜಿನಲಿ
ಗಮ್ಮೆನ್ನುವ ಹೂವೆ
ಚಿನ್ನದಂತೆ ಹೊಳೆಯುವ
ವಿಧ ವಿಧದ ಹೂವೆ.

ಗೀತಾಂಜಲಿ. M
10ಎ ತರಗತಿ


No comments:

Post a Comment