ಸಹಪಾಠಿಗೆ ಸಹಾಯ ಹಸ್ತ
        ಸಂಕಷ್ಟದಲ್ಲಿರುವ ಸಹಪಾಠಿಗೆ ಸ್ವಯಂ ಪ್ರೇರಣೆಯಿಂದ ಅಳಿಲು ಸೇವೆಯ ನೆರವು ನೀಡಿ ಹತ್ತನೆಯ ತರಗತಿಯ ಮಕ್ಕಳು  ಮಾನವೀಯತೆಯನ್ನು ಮೆರೆದಿದ್ದಾರೆ. ಹತ್ತನೆಯ 'ಎ'ವಿಭಾಗದ ಮನೋಜನ ಸಮಸ್ಯೆಗಳಿಗೆ ತಮ್ಮಿಂದಾಗುವಂತೆ ಸಹಾಯ ನೀಡಲು ಮುಂದಾದ ತರಗತಿಯ ಮಕ್ಕಳು ಆತನಿಗೆ ಎರಡು ಜೊತೆ ಹೊಚ್ಚ ಹೊಸ ಸಮವಸ್ತ್ರಗಳನ್ನು ನೀಡಿದ್ದಾರೆ.
         ತರಗತಿಯಲ್ಲಿ ನಡೆದ ಸರಳ ಸಮಾರಂಭ ವೊಂದರಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎ. ವಿಷ್ಣು ಭಟ್ ಈ ಕೊಡುಗೆಯನ್ನು ಮನೋಜನಿಗೆ ಹಸ್ತಾಂತರಿಸಿದರು.ಅಧ್ಯಾಪಕರಾದ  ಶ್ರೀ ಎಸ್. ಗಣಪತಿ ಭಟ್,  ಶ್ರೀ ರಾಧಾಕೃಷ್ಣ ಎಂ.  ಶ್ರೀಮತಿ ಚಂದ್ರಪ್ರಭಾ ಕೆ.,  ಶ್ರೀ ರಾಜೇಶ್ ಕುಮಾರ್ ಉಪಸ್ಥಿತರಿದ್ದರು.ಸಹಪಾಠಿಗಳಾದ ಕ್ಲಾಸ್ ಲೀಡರ್ ಭಾಗ್ಯಾ,,  ಶ್ರೀಜಾ ರೈ, ನಿಶ್ಟಿತಾ, ಮೀನಾಕ್ಷಿ, ಸುಪ್ರೀತಾ, ಸಂಧ್ಯಾ,, ಸುರಕ್ಷಾ, ವಿನೋದ್ ಕುಮಾರ್, ಸಂದೇಶ್, ಸಚಿನ್ ಮೊದಲಾದವರು ಉತ್ತಮ ಭವಿಷ್ಯವನ್ನು ಕೋರಿ ಶುಭಹಾರೈಸಿದರು. ತನ್ನ ಕಷ್ಟಕ್ಕೆ ನೆರವಾದ ಗೆಳೆಯ ಗೆಳತಿಯರಿಗೆ ಮನೋಜ್ ಮನಸಿನಾಳದ ನುಡಿಗಳಿಂದ ಧನ್ಯವಾದ ಸೂಚಿಸಿದನು.  
        ಕಲಿಕೆಯಲ್ಲಿ ಮುಂದಿರುವ ಈ ಪ್ರತಿಭಾವಂತನಿಗೆ ನಮ್ಮೆಲ್ಲರ ಹಾರ್ದಿಕ ಶುಭ ಕಾಮನೆಗಳು.
 
 
 

 



.jpg)






