ನೋವಿಗೆ
ಮಿಡಿದ ಎಳೆಯ ಮನಗಳು-
ಚಿಕಿತ್ಸಾ
ನಿಧಿ ಹಸ್ತಾಂತರ
ಶೈಕ್ಷಣಿಕ
ಪ್ರವಾಸ ಮುಗಿಸಿ ಮುದದಿಂದ
ಮರಳುತ್ತಿದ್ದ ಕಾರಡ್ಕ
ಜಿ.ವಿ.ಎಚ್.ಎಸ್.ಎಸ್.ನ
ವಿದ್ಯಾರ್ಥಿಗಳಿದ್ದ ಬಸ್ಸು
ಅಫಘಾತಕ್ಕೊಳಗಾಗಿ ಗಂಭೀರ
ಸ್ಥಿತಿಯಲ್ಲಿ ಚಿಕಿತ್ಸೆ
ಪಡೆಯುತ್ತಿರುವ ವಿದ್ಯಾರ್ಥಿ
ಶಬರೀನಾಥನ ನೋವಿಗೆ ಸ್ಪಂದಿಸಿ
ಮುಳ್ಳೇರಿಯ ಜಿ.ವಿ.ಎಚ್.ಎಸ್.ಎಸ್.ನ
ವಿದ್ಯಾರ್ಥಿ ಸಮೂಹ ಮತ್ತು ಅಧ್ಯಾಪಕ
ವರ್ಗ ಮಾನವೀಯತೆ ಮೆರೆದಿವೆ.
ಹೈಸ್ಕೂಲು,
ವಿ.ಎಚ್.ಎಸ್,
ಮತ್ತು
ಎಚ್.ಎಸ್.ಎಸ್
ವಿಭಾಗಗಳ ಎಲ್ಲ ವಿದ್ಯಾರ್ಥಿ,
ಅಧ್ಯಾಪಕ,
ಸಿಬ್ಬಂದಿಗಳು
ಸಂಗ್ರಹಿಸಿದ ನಿಧಿಯನ್ನು ಇತ್ತೀಚೆಗೆ
ಶಾಲೆಯಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ
ಆದೂರು ಠಾಣೆಯ ಎಸ್.ಐ.
ಶ್ರೀ ಎ.
ಸಂತೋಷ್ ಕುಮಾರ್ ಇವರು ಕಾರಡ್ಕ
ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ
ಅಧ್ಯಕ್ಷರಾದ ಶ್ರೀ ಎ.ವಿಜಯಕುಮಾರ್ ಇವರಿಗೆ
ನಿಧಿಯನ್ನು ಹಸ್ತಾಂತರಿಸಿ
ಸಕಾರಾತ್ಮಕವಾಗಿ ಸ್ಪಂದಿಸಿದ
ಸಹೃದಯಿಗಳನ್ನು ಅಭಿನಂದಿಸಿದರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ ವಿಷ್ಣು
ಭಟ್,
ಎಚ್.ಎಸ್.ಎಸ್
ವಿಭಾಗದ ಪ್ರಭಾರ ಪ್ರಾಂಶುಪಾಲ
ಶ್ರೀ ನಾರಾಯಣನ್ ಪಿ,
ರಕ್ಷಕ
ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ
ವೇಣುಗೋಪಾಲ ಮೊದಲಾದವರು ಮಾತನಾಡಿ
ಗಾಯಾಳು ವಿದ್ಯಾರ್ಥಿಯು ಶೀಘ್ರವಾಗಿ
ಗುಣಮುಖನಾಗಲೆಂದು ಹಾರೈಸಿದರಲ್ಲದೆ
ನಿಧಿ ಸಂಗ್ರಹಕ್ಕೆ ಕೈಗೂಡಿಸಿದವರನ್ನು
ಅಭಿನಂದಿಸಿದರು.
ಕಾರಡ್ಕ
ಜಿ.ವಿ.ಎಚ್.ಎಸ್.ಎಸ್.ನ
ಮುಖ್ಯೋಪಾಧ್ಯಾಯರಾದ ಶ್ರೀ
ಕರುಣಾಕರನ್ ಎಂ. ಮತ್ತು ರಕ್ಷಕ
ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಎ.ವಿಜಯಕುಮಾರ್ ತಮ್ಮ ಮನವಿಗೆ ಕ್ಷಿಪ್ರವಾಗಿ
ಸ್ಪಂದಿಸಿದ ವಿದ್ಯಾರ್ಥಿಮತ್ತು
ಅಧ್ಯಾಪಕ ವೃಂದಕ್ಕೆ ಹೃತ್ಪೂರ್ವಕವಾದ
ಧನ್ಯವಾದಗಳನ್ನು ಸಲ್ಲಿಸಿದರು.
ಅಧ್ಯಾಪಕ
ಶ್ರೀ ರಾಘವೇಂದ್ರ ಕೆ.
ವಂದಿಸಿದರು.
ಎಲ್ಲ
ವಿದ್ಯಾರ್ಥಿಗಳು,
ಅಧ್ಯಾಪಕ
ಸಿಬ್ಬಂದಿಗಳು ಮತ್ತು ರಕ್ಷಕ
ಶಿಕ್ಷಕ ಸಂಘದ ಪ್ರತಿನಿಧಿಗಳು
ಉಪಸ್ಥಿತರಿದ್ದು ಗಾಯಾಳು
ವಿದ್ಯಾರ್ಥಿಯ ಶೀಘ್ರ ಚೇತರಿಕೆಗಾಗಿ
ಮನದುಂಬಿ ಪ್ರಾರ್ಥಿಸಿದರು.
No comments:
Post a Comment