SCROLL NEWS

SCHOOL WIKI >>> ENTER ***INCOME TAX-DOWNLOAD FORM 16 from TRACES SITE >> TUTORIAL in KANNADA****TENTH PAY REVISION/ PENSION REVISION NOTIFICATIONS AND FORMS** GPF CREDIT SLIP- -DOWNLOAD>> LINK>HEALTH AND PHYSICAL EDN- ACTIVITY BOOK- STD V,VI,VII,VIII: LINK

Link Tabs2

SSLC RESULTSSLC 2016-17 iExaMS VIDYA SAMUNNATHI SCHOLARSHIP PF CREDIT SLIPSCHOOL WIKI


6th WORKING DAY RPT-ONLINE TEXTBOOK DATA 2016-17TEXTBOOK INDENTING 2017-18 UPDATE AADHAR DATA


TENTH EQUIVALENCY-2016TEACHER TEXTS-2016SSLC QUESTION POOL

FLASH NEWS

TEACHER TEXTS-2015* TEXTBOOKS-2015*STD VIII - SAMPLE QUESTIONS-ALL SUBJECTS>>>VIEW HERE***NEW DIGITAL COLLABORATIVE TEXTBOOKS 2016-VIEW HERE***WIFS DATA UPLOAD***

31 July 2014

BLEND- CONTINUED TRAINING


BLEND- II Phase Training at GVHSS Mulleria


       The second phase of BLEND Training for Teachers of all schools in the District started today(31 July 2014) in 14 centres all over the district. The training aims at enabling the teachers to design and maintain a Blog for their school. Te competency they exhibited in the previous phase of training was really amazing. With the second phase and regular follow up all of them will be able to maintain a Blog for their school and thereon announce their presence and achievements in the field of General Education, which is facing a tough competition from among various other agencies including the Unaided Institutions, CBSE etc.

28 July 2014

ಗೃಹ ಸಂದರ್ಶನದ ಫಲಶ್ರುತಿ


ಮನೋಜನಿಗೆ ಸಹಾಯಹಸ್ತ

          ಚಿತ್ರವನ್ನು ಗಮನವಿಟ್ಟು ನೋಡಿ. ಹಿನ್ನೆಲೆಯಲ್ಲಿ ಕಾಣುತ್ತಿರುವ ರಚನೆಯನ್ನು ಮನೆಯೆಂದೋ ಗುಡಿಸಲೆಂದೋ ಕರೆಯಬಹುದೇ ನೀವೇ ನಿರ್ಧರಿಸಬೇಕು! ನಿಮ್ಮ ನಿಲುವು ಏನೇ ಆದರೂ ಚಿತ್ರದಲ್ಲಿ ಕಾಣುವ ಮೂವರೂ ಅದರೊಳಗೆ ಬದುಕುತ್ತಿರುವರೆಂಬುದನ್ನಂತೂ ನಂಬಲೇ ಬೇಕು. ಆತ ಮನೋಜ್ ಕುಮಾರ್, ನಡುವೆ ಅಮ್ಮ ಪ್ರೇಮಾ, ಪಕ್ಕದಲ್ಲಿ ತಂಗಿ ಮಮತಾ. ಮನೋಜ್ ಕುಮಾರ್ ನಮ್ಮ ಶಾಲೆಯ ಹತ್ತನೆಯ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಯಾದರೆ ಮಮತಾ ಮುಳ್ಳೇರಿಯ ಎ.ಯು.ಪಿ. ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿನಿ. ಅಮ್ಮ ಬೀಡಿ ಸುತ್ತಿ ಗಳಿಸುವ ಪುಡಿಗಾಸೇ ಆದಾಯದ ಮೂಲ.
           ಮನೆಗೆ ನಂಬ್ರವಿಲ್ಲ ಹಾಗಾಗಿ ರೇಶನ್ ಕಾರ್ಡಿಲ್ಲ, ವಿದ್ಯುತ್ ಸಂಪರ್ಕವಿಲ್ಲ. ಸರಕಾರದ ವಸತಿ ಯೋಜನೆಗಳನ್ನು ಪಡೆಯೋಣವೆಂದರೆ ತಲೆಮಾರುಗಳ ಹಿಂದಿನ ಹಿರಿಯರ ಆಸ್ತಿ ಪಾಲಾಗದೆ ಇರುವುದರಿಂದ ಸ್ವಂತ ಭೂಮಿಯಿಲ್ಲ. ವಿಚಿತ್ರವೆಂದರೆ ಚಿಕ್ಕದೊಂದು ಸಮಸ್ಯೆ ಸಿಕ್ಕರೂ ರಸ್ತೆ ಕವಲಿನಲ್ಲಿ ಮೈಕ್ ಹಿಡಿದು ಸಮಸ್ತ ಲೋಕದ ಹಿತರಕ್ಷಣೆಯ ಕರಾರು ಪಡೆದವರಂತೆ ಗಂಟಲು ಬಿರಿಯುವ ಮಂದಿಗೆ, ಐದು ವರ್ಷಗಳಿಗೊಮ್ಮೆ ಪ್ರತ್ಯಕ್ಷವಾಗಿ ಹಲ್ಲುಕಿರಿಯುವ ಮಂದಿಗೆ ಕಾಣಿಸದ ಈ ಸಂಕಷ್ಟವು ಲೋಕದ ಗಮನಕ್ಕೆ ಬರಬೇಕಾದರೆ ಗೃಹಸಂದರ್ಶನಕ್ಕೆ ಬಂದ ಅಧ್ಯಾಪಕರ ಮನ ಕಲಕಬೇಕಾಯಿತು. ಅಧ್ಯಾಪಕರ ಈ ಕಳಕಳಿಗೆ ಮಾಧ್ಯಮಲೋಕ ಸ್ಪಂದಿಸಿತು. ಪರಿಣಾಮವಾಗಿ ಉದಾರಮತಿಗಳ ಹೃದಯ ಮಿಡಿಯಿತು. ಪಠನೋಪಕರಣಗಳು, ಪೀಠೋಪಕರಣಗಳು, ಕೈಲಾದ ಧನಸಹಾಯ, ಬೆಳಕಿಗಾಗಿ ಸೌರದೀಪಕ್ಕಾಗಿ ಪ್ರಯತ್ನ ಹೀಗೆ ಸಹೃದಯಿಗಳ ಸಹಾಯಹಸ್ತ ಚಾಚುತ್ತಿದೆ. ಸೂರಿಗಾಗಿ ಜನಪ್ರತಿನಿಧಿಗಳ ಬೆನ್ನುಹತ್ತುವಿಕೆಯೂ ಪ್ರಾರಂಭವಾಗಿದೆ.
          ಒಂದೊಂದು ಕಡೆಯಿಂದ ನೆರವು ದೊರತಾಗಲೂ ಈ ಕುಟುಂಬವು ಕೃತಜ್ಞತೆಯಿಂದ ತಲೆಬಾಗುತ್ತಿದೆ. ಈ ವಿಚಾರವನ್ನು ಬೆಳಕಿಗೆ ತಂದ ಅಧ್ಯಾಪಕರ ಹೃದಯವೂ ಧನ್ಯತೆಯಿಂದ ತುಂಬುತ್ತಿದೆ.

"ಮಗುವನ್ನು ಅರಿಯಲು"


          ಗೃಹ ಸಂದರ್ಶನ : ಕಟುವಾಸ್ತವದ ಆನಾವರಣ
        (' ಗೃಹ ಸಂದರ್ಶನ'- ಕೆಮರಾ ಕಣ್ಣಿಲ್ಲಿ ACTIVITIES ಪುಟದಲ್ಲಿ.)

         ತ್ತನೆಯ ತರಗತಿಗೆ ತಲುಪಿದರೂ ಸರಾಗವಾಗಿ ಕನ್ನಡದಲ್ಲಿ ಮಾತನಾಡಲಾಗದ, ಕನ್ನಡದಲ್ಲಿ ತಪ್ಪಿಲ್ಲದೆ ಬರೆಯಲಾಗದ, ಇಂಗ್ಲಿಷ್ ಬರೆಯಲು ಪರದಾಡುವ, ಓದಲು ಹೇಳಿದರೆ ಸಾಲುಗಳ ನಡುವೆ ತಡಕಾಡಿ ಸ್ತಬ್ಧವಾಗುವ ಮಗು. ಒಂದು ದಿನ ಕಲಿಕೆಯ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರೆ ಇನ್ನೊಂದು ದಿನ ನಿರಾಸಕ್ತ. ತರಗತಿಯ ಗದ್ದಲದ ನಡುವೆಯೂ ಗುಂಪಿಗೆ ಸೇರಿಕೊಳ್ಳದ ಏಕಾಂಗಿತನ. ಬಾಯಲ್ಲಿ ಪಟಪಟ ಮಾತಾಡುವ, ಬಾಯ್ದೆರೆ ಪ್ರಶ್ನೆಗಳಿಗೆ ದಂಗಾಗದ ಮಗುವಿಗೆ ಲಿಖಿತ ಪರೀಕ್ಷೆಯ ಅಂಕಗಳಿಕೆಯಲ್ಲಿ ಹಿನ್ನಡೆ.
            ಹೀಗೆ ಬಿಡಿಸಲಾಗದ ಕಗ್ಗಂಟುಗಳ ಒಗಟುಗಳನ್ನು ಬಿಡಿಸಲು ಅಧ್ಯಾಪಕರು ಇಲಾಖೆಯ ನೂತನವಾದ "ಮಗುವನ್ನು ಅರಿಯಲು" ಎನ್ನುವ ಆಶಯದ ಬೆಂಬತ್ತಿ ಮಕ್ಕಳ ಗೃಹ ಸಂದರ್ಶನ ನಡೆಸಿದಾಗ ತೆರೆಸರಿಸಿ ಬಯಲಾದ ಕಟು ವಾಸ್ತವಗಳು ದಂಗು ಬಡಿಸಿದವು. ದಶಕಗಳ ಅಧ್ಯಾಪನದ ಅನುಭವ, ಮಕ್ಕಳ ಮನಃಶಾಸ್ತ್ರ ಅಧ್ಯಯನದಲ್ಲಿ ಪಾರಂಗತರಾಗಿ ಉನ್ನತಾಂಕದಲ್ಲಿ ಬಿ.ಎಡ್. ಪದವಿ, ನಲ್ವತ್ತು-ಐವತ್ತು ವರ್ಷಗಳ ಜೀವನಾನುಭವ -ಅಧ್ಯಾಪಕರ ಈ ಎಲ್ಲ ಹೆಗ್ಗಳಿಕೆಗಳೂ ಈ

06 July 2014

SANSKRIT SCHOLARSHIP: WINNERS


   
Congratulations to these winners of Sanskrit Scholarship 2013-14

Akshatha K. Std X A
Annapoorna M.R. Std X A
Akshitha   Std VIII A

03 July 2014

BLEND- A NOVEL NETWORK OF SCHOOLS


           A dream project of DIET Kasaragod visualises a wide network of all departmental schools of Kasaragod district through the unique concept BLEND which describes itself as Blog for Dynamic Educational Network. This is a wide spectrum for all schools to go worldwide, beyond the campuses, beyond the geographical borders of the panchayath, the sub-district, the educational district,the revenue district.......into the vast outer world- the World Wide Web.
           As per the visions of the project every school can publish all its curricular, co-curricular, extra curricular activities held inside and outside the classrooms in the forms of reports,pictures, paper cuttings and video clippings through its own blog. Not only the the parent community but also all those interested in academic activities held in our schools can view these details from their home itself. Now that the Net has reached almost home through the task is not a tedious one.
    

02 July 2014

June 26: Anti Narcotics Day Celebrated at GVHSS Mulleria



Mulleria: The students of GVHSS Mulleria conducted a Rally to create awareness among the public and among themselves against the use of Narcotic products , on the occasion of Anti Narcotic Day Celebrations. Holding placards announcing the demerits of Narcotic products all the students covered the premises of the school campus shouting slogans against the use of Narcotics.

ಜೂನ್ 26 : ವಿಶ್ವ ಮಾದಕದ್ರವ್ಯ ವಿರೋಧಿ ದಿನಾಚರಣೆ





'ಪಾನ್ ಮಸಾಲ ತಿನ್ನದಿರಿ ಪಾಮನ ಜನ್ಮವ ಕೆಡಿಸದಿರಿ', 'ಮಾದಕ ವಸ್ತುಗಳ ಬಳಸದಿರಿ ಮಾರಕ ರೋಗಕೆ ಸಿಲುಕದಿರಿ', 'ಧೂಮಪಾನವ ಮಾಡದಿರಿ ನರಕದ ಕೂಪಕೆ ಬೀಳದಿರಿ', 'ಮದ್ಯದ ಅಮಲಿನ ಗಮ್ಮತ್ತು ತರುವುದು ಬದುಕಿಗೆ ಆಪತ್ತು' ಮುಂತಾಗಿ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮುಗಿಲು ಮುಟ್ಟುವ ಘೋಷಣೆಗಳೊಂದಿಗೆ ಜನರಲ್ಲಿ ಮಾದಕದ್ರವ್ಯ ಸೇವನೆಯ ವಿಪತ್ತುಗಳ ತಿಳುವಳಿಕೆ ಮೂಡಿಸುವ ಸಲುವಾಗಿ ಮುಳ್ಳೇರಿಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೆರವಣಿಗೆ ನಡೆಸಿದರು.