ಮನೋಜನಿಗೆ
ಸಹಾಯಹಸ್ತ
ಈ
ಚಿತ್ರವನ್ನು ಗಮನವಿಟ್ಟು ನೋಡಿ.
ಹಿನ್ನೆಲೆಯಲ್ಲಿ
ಕಾಣುತ್ತಿರುವ ರಚನೆಯನ್ನು
ಮನೆಯೆಂದೋ ಗುಡಿಸಲೆಂದೋ ಕರೆಯಬಹುದೇ
ನೀವೇ ನಿರ್ಧರಿಸಬೇಕು!
ನಿಮ್ಮ ನಿಲುವು
ಏನೇ ಆದರೂ ಚಿತ್ರದಲ್ಲಿ ಕಾಣುವ
ಮೂವರೂ ಅದರೊಳಗೆ
ಬದುಕುತ್ತಿರುವರೆಂಬುದನ್ನಂತೂ
ನಂಬಲೇ ಬೇಕು. ಆತ
ಮನೋಜ್ ಕುಮಾರ್,
ನಡುವೆ ಅಮ್ಮ ಪ್ರೇಮಾ,
ಪಕ್ಕದಲ್ಲಿ ತಂಗಿ
ಮಮತಾ. ಮನೋಜ್
ಕುಮಾರ್ ನಮ್ಮ ಶಾಲೆಯ ಹತ್ತನೆಯ
ತರಗತಿಯ ಪ್ರತಿಭಾವಂತ
ವಿದ್ಯಾರ್ಥಿಯಾದರೆ ಮಮತಾ
ಮುಳ್ಳೇರಿಯ ಎ.ಯು.ಪಿ.
ಶಾಲೆಯ ಏಳನೆಯ
ತರಗತಿಯ ವಿದ್ಯಾರ್ಥಿನಿ.
ಅಮ್ಮ ಬೀಡಿ ಸುತ್ತಿ
ಗಳಿಸುವ ಪುಡಿಗಾಸೇ ಆದಾಯದ
ಮೂಲ.
ಮನೆಗೆ
ನಂಬ್ರವಿಲ್ಲ ಹಾಗಾಗಿ ರೇಶನ್
ಕಾರ್ಡಿಲ್ಲ, ವಿದ್ಯುತ್
ಸಂಪರ್ಕವಿಲ್ಲ. ಸರಕಾರದ
ವಸತಿ ಯೋಜನೆಗಳನ್ನು ಪಡೆಯೋಣವೆಂದರೆ
ತಲೆಮಾರುಗಳ ಹಿಂದಿನ ಹಿರಿಯರ
ಆಸ್ತಿ ಪಾಲಾಗದೆ ಇರುವುದರಿಂದ
ಸ್ವಂತ ಭೂಮಿಯಿಲ್ಲ.
ವಿಚಿತ್ರವೆಂದರೆ
ಚಿಕ್ಕದೊಂದು ಸಮಸ್ಯೆ ಸಿಕ್ಕರೂ
ರಸ್ತೆ ಕವಲಿನಲ್ಲಿ ಮೈಕ್
ಹಿಡಿದು ಸಮಸ್ತ ಲೋಕದ ಹಿತರಕ್ಷಣೆಯ
ಕರಾರು ಪಡೆದವರಂತೆ ಗಂಟಲು
ಬಿರಿಯುವ ಮಂದಿಗೆ,
ಐದು ವರ್ಷಗಳಿಗೊಮ್ಮೆ
ಪ್ರತ್ಯಕ್ಷವಾಗಿ ಹಲ್ಲುಕಿರಿಯುವ
ಮಂದಿಗೆ ಕಾಣಿಸದ ಈ ಸಂಕಷ್ಟವು
ಲೋಕದ ಗಮನಕ್ಕೆ ಬರಬೇಕಾದರೆ
ಗೃಹಸಂದರ್ಶನಕ್ಕೆ ಬಂದ ಅಧ್ಯಾಪಕರ
ಮನ ಕಲಕಬೇಕಾಯಿತು.
ಅಧ್ಯಾಪಕರ ಈ ಕಳಕಳಿಗೆ
ಮಾಧ್ಯಮಲೋಕ ಸ್ಪಂದಿಸಿತು.
ಪರಿಣಾಮವಾಗಿ
ಉದಾರಮತಿಗಳ ಹೃದಯ ಮಿಡಿಯಿತು.
ಪಠನೋಪಕರಣಗಳು,
ಪೀಠೋಪಕರಣಗಳು,
ಕೈಲಾದ ಧನಸಹಾಯ,
ಬೆಳಕಿಗಾಗಿ ಸೌರದೀಪಕ್ಕಾಗಿ
ಪ್ರಯತ್ನ ಹೀಗೆ ಸಹೃದಯಿಗಳ
ಸಹಾಯಹಸ್ತ ಚಾಚುತ್ತಿದೆ.
ಸೂರಿಗಾಗಿ ಜನಪ್ರತಿನಿಧಿಗಳ
ಬೆನ್ನುಹತ್ತುವಿಕೆಯೂ ಪ್ರಾರಂಭವಾಗಿದೆ.
ಒಂದೊಂದು
ಕಡೆಯಿಂದ ನೆರವು ದೊರತಾಗಲೂ
ಈ ಕುಟುಂಬವು ಕೃತಜ್ಞತೆಯಿಂದ
ತಲೆಬಾಗುತ್ತಿದೆ.
ಈ ವಿಚಾರವನ್ನು
ಬೆಳಕಿಗೆ ತಂದ ಅಧ್ಯಾಪಕರ ಹೃದಯವೂ
ಧನ್ಯತೆಯಿಂದ ತುಂಬುತ್ತಿದೆ.
No comments:
Post a Comment