'ಪಾನ್
ಮಸಾಲ ತಿನ್ನದಿರಿ ಪಾಮನ ಜನ್ಮವ
ಕೆಡಿಸದಿರಿ', 'ಮಾದಕ
ವಸ್ತುಗಳ ಬಳಸದಿರಿ ಮಾರಕ ರೋಗಕೆ
ಸಿಲುಕದಿರಿ', 'ಧೂಮಪಾನವ
ಮಾಡದಿರಿ ನರಕದ ಕೂಪಕೆ ಬೀಳದಿರಿ',
'ಮದ್ಯದ ಅಮಲಿನ ಗಮ್ಮತ್ತು
ತರುವುದು ಬದುಕಿಗೆ ಆಪತ್ತು'
ಮುಂತಾಗಿ ಕನ್ನಡ ಮತ್ತು
ಮಲಯಾಳಂ ಭಾಷೆಗಳಲ್ಲಿ ಮುಗಿಲು
ಮುಟ್ಟುವ ಘೋಷಣೆಗಳೊಂದಿಗೆ ಜನರಲ್ಲಿ
ಮಾದಕದ್ರವ್ಯ ಸೇವನೆಯ ವಿಪತ್ತುಗಳ
ತಿಳುವಳಿಕೆ ಮೂಡಿಸುವ ಸಲುವಾಗಿ
ಮುಳ್ಳೇರಿಯ ಸರಕಾರಿ
ಪ್ರೌಢಶಾಲೆಯ ವಿದ್ಯಾರ್ಥಿ
ವಿದ್ಯಾರ್ಥಿನಿಯರು ಮೆರವಣಿಗೆ
ನಡೆಸಿದರು.
ಮಾದಕದ್ರವ್ಯ
ಸೇವನೆಯ ವಿಪತ್ತುಗಳ ಪ್ರತೀಕವಾಗಿ
ಮಾ| ದಿವಿನ್ ಧರಿಸಿದ್ದ
ವೇಷವು ಎಲ್ಲರ ಗಮನವನ್ನು ಸೆಳೆಯಿತು.
ಇದಕ್ಕೆ ಮುಂಚಿತವಾಗಿ
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ
ಶ್ರೀ ರಾಘವೇಂದ್ರ, ಹಿರಿಯ
ಅಧ್ಯಾಪಿಕೆ ಶ್ರೀಮತಿ ಚಂದ್ರಕಲಾ,
ಅಧ್ಯಾಪಕ ಶ್ರೀ ಪುರುಷೋತ್ತಮನ್
ಮಾದಕದ್ರವ್ಯ ಸೇವನೆಯಿಂದ ಉಂಟಾಗುವ
ಅಪಾಯಗಳು ಮತ್ತು ಮಾದಕದ್ರವ್ಯ
ವಿರೋಧಿ ದಿನಾಚರಣೆಯ ಪ್ರಾಧಾನ್ಯದ
ಕುರಿತು ಮಕ್ಕಳಿಗೆ ತಿಳುವಳಿಕೆ
ನೀಡಿದರು.
ಅಧ್ಯಾಪಕರಾದ
ಶ್ರೀ ರಾಧಾಕೃಷ್ಣ ಕನ್ನಡದಲ್ಲಿಯೂ
ಶ್ರೀ ಪುಷ್ಪಾಂಗದನ್ ಮಲಯಾಳಂನಲ್ಲಿಯೂ
ಮಕ್ಕಳಿಗೆ ಮಾದಕದ್ರವ್ಯ ವಿರೋಧಿ
ಪ್ರತಿಜ್ಞೆಯನ್ನು ಭೋದಿಸಿದರು.
No comments:
Post a Comment