ಹತ್ತನೆಯ
ತರಗತಿಗೆ ತಲುಪಿದರೂ ಸರಾಗವಾಗಿ
ಕನ್ನಡದಲ್ಲಿ
ಮಾತನಾಡಲಾಗದ,
ಕನ್ನಡದಲ್ಲಿ
ತಪ್ಪಿಲ್ಲದೆ ಬರೆಯಲಾಗದ,
ಇಂಗ್ಲಿಷ್
ಬರೆಯಲು ಪರದಾಡುವ,
ಓದಲು
ಹೇಳಿದರೆ ಸಾಲುಗಳ ನಡುವೆ ತಡಕಾಡಿ
ಸ್ತಬ್ಧವಾಗುವ ಮಗು.
ಒಂದು ದಿನ
ಕಲಿಕೆಯ ಚಟುವಟಿಕೆಗಳಲ್ಲಿ
ಉತ್ಸಾಹದಿಂದ ಪಾಲ್ಗೊಂಡರೆ
ಇನ್ನೊಂದು ದಿನ ನಿರಾಸಕ್ತ.
ತರಗತಿಯ
ಗದ್ದಲದ ನಡುವೆಯೂ ಗುಂಪಿಗೆ
ಸೇರಿಕೊಳ್ಳದ ಏಕಾಂಗಿತನ.
ಬಾಯಲ್ಲಿ
ಪಟಪಟ ಮಾತಾಡುವ,
ಬಾಯ್ದೆರೆ
ಪ್ರಶ್ನೆಗಳಿಗೆ ದಂಗಾಗದ ಮಗುವಿಗೆ
ಲಿಖಿತ ಪರೀಕ್ಷೆಯ ಅಂಕಗಳಿಕೆಯಲ್ಲಿ
ಹಿನ್ನಡೆ.
ಹೀಗೆ
ಬಿಡಿಸಲಾಗದ ಕಗ್ಗಂಟುಗಳ ಒಗಟುಗಳನ್ನು
ಬಿಡಿಸಲು ಅಧ್ಯಾಪಕರು ಇಲಾಖೆಯ
ನೂತನವಾದ "ಮಗುವನ್ನು
ಅರಿಯಲು" ಎನ್ನುವ
ಆಶಯದ ಬೆಂಬತ್ತಿ ಮಕ್ಕಳ ಗೃಹ
ಸಂದರ್ಶನ ನಡೆಸಿದಾಗ ತೆರೆಸರಿಸಿ
ಬಯಲಾದ ಕಟು ವಾಸ್ತವಗಳು ದಂಗು
ಬಡಿಸಿದವು. ದಶಕಗಳ
ಅಧ್ಯಾಪನದ ಅನುಭವ,
ಮಕ್ಕಳ ಮನಃಶಾಸ್ತ್ರ
ಅಧ್ಯಯನದಲ್ಲಿ ಪಾರಂಗತರಾಗಿ
ಉನ್ನತಾಂಕದಲ್ಲಿ ಬಿ.ಎಡ್.
ಪದವಿ,
ನಲ್ವತ್ತು-ಐವತ್ತು
ವರ್ಷಗಳ ಜೀವನಾನುಭವ -ಅಧ್ಯಾಪಕರ
ಈ ಎಲ್ಲ ಹೆಗ್ಗಳಿಕೆಗಳೂ ಈ
ಮುಗ್ಧ ಮನಸ್ಸಿನ ಎಳೆಹರೆಯದ ಜೀವಗಳು ಬೆರಳೆಣಿಕೆಯ ವರ್ಷಗಳಲ್ಲಿ ಅನುಭವಿಸಿದ ಯಾತನೆಗಳ ನಡುವೆ ಏನೇನೂ ಅಲ್ಲವೆನಿಸುವ ವೈರುಧ್ಯ. ತಿಕ್ಕಿ ತೊಳೆದು ಬೆಳ್ಳಗಾಗಿಸಲು ಅಸಾಧ್ಯವೆನಿಸುವ ಬಡತನದ ಕೊಚ್ಚೆ, ಜಗವನ್ನೇ ಗೆಲ್ಲುವ ಆರೋಗ್ಯ ಸೌಭಾಗ್ಯಗಳಿದ್ದರೂ ದುಶ್ಚಟಗಳ ದಾಸರಾದ ರಕ್ಷಕರ ನಡುವೆ ಅಸಹಾಯಕ ಸ್ಥಿತಿಯ ಮಗು, ತಂದೆತಾಯಿಯರಗಲಿದ ಫಲವಾಗಿ ಬಂಧುಗಳ ಔದಾರ್ಯದ ನೆರಳು ಬಿಸಿಲಿನಾಟದಲ್ಲಿ ನಲುಗುವ ಬಾಲ್ಯ- ಹೀಗೆ ಸಾಲುಸಾಲಾಗಿ ದುರಿತ ದುಮ್ಮಾನಗಳ ಸಂತೆ...

ಸಾರ್ವಜನಿಕ
ಶಿಕ್ಷಣ ಇಲಾಖೆಯ ವಿನೂತನ ಯೋಜನೆಯಾದ
"ಮಗುವನ್ನು
ಅರಿಯಲು" ಎನ್ನುವ
ಹತ್ತನೆಯ ತರಗತಿಯಲ್ಲಿ ಕಲಿಯುವ
ಮಕ್ಕಳ ಗೃಹ ಸಂದರ್ಶನ ಯೋಜನೆಯ
ಭಾಗವಾಗಿ ಅಧ್ಯಾಪಕರು ತಮ್ಮ
ವಿದ್ಯಾರ್ಥಿ ವಿದ್ಯಾರ್ಥಿನಿಯರ
ಮನೆಗಳಿಗೆ ತಲುಪಿದಾಗ ಅನಾವರಣ
ಗೊಂಡ ಕಟುಸತ್ಯಗಳಿವು.
ಕಣ್ಣಿನ ಮೂಲೆಯ
ಹನಿಯನ್ನು ಜಿನುಗಲೂ ಬಿಡಲಾಗದ,
ಎಡಗೈಯ ಕಿರುಬೆರಳಿನಿಂದ
ಒರೆಸಲೂ ಆಗದಂತಹ ಮುಜುಗರವೋ,
ಸಂಕಟವೋ ಹೇಳಲಾಗದ
ಸಂದಿಗ್ಧ ಸ್ಥಿತಿ.
'ಹಲ್ಲಿದ್ದವಗೆ
ಕಡಲೆಯಿಲ್ಲ, ಕಡಲೆಯಿದ್ದವಗೆ
ಹಲ್ಲಿಲ್ಲ'ದ ಸ್ಥಿತಿ ಕೆಲವೆಡೆಯಾದರೆ
'ಹಲ್ಲು- ಕಡಲೆ 'ಎರಡೂ ಇಲ್ಲದ ದುರವಸ್ಥೆ
ಇನ್ನೊಂದೆಡೆ. ಮತ್ತೊಂದೆಡೆ 'ಹಲ್ಲು- ಕಡಲೆ'ಗಳು
ಯಥೇಚ್ಥವಿದ್ದೂ ಜಗಿಯಲು ಮನಸ್ಸೇ
ಇಲ್ಲದ ಸೋಮಾರಿತನ.
ಈ ಎಲ್ಲ
ಅಂಧಕಾರಗಳ ನಡುವೆ ಅಲ್ಲಲ್ಲಿ
ಮಿನುಗುವ ಹೊಂಗಿರಣಗಳು!
ಹೊಟ್ಟೆ ಬಟ್ಟೆ ಕಟ್ಟಿ
ಮಕ್ಕಳ ಶಿಕ್ಷಣಕ್ಕೆ ಬೆಂಬಲವೀಯುವ
ವಿಧವೆ ತಾಯಿ, ಆ
ಮಾತೆಯ ಪುಣ್ಯವೇ ರೂಪವೆತ್ತಂತಿರುವ
ಶ್ರಮಜೀವಿ ಮಗು- ಹಾಗೆಯೇ
ಸಕಲ ಸೌಭಾಗ್ಯಗಳ ನಡುವೆ ಸಹಜ
ಸಾಮರ್ಥ್ಯವನ್ನು ಒರೆಗೆ ಹಚ್ಚಿ
ಹೊಳಪುನೀಡುತ್ತಿರುವ ಪರಿಶ್ರಮಿಗಳು-
ರಕ್ಷಕರು ಮತ್ತು
ಶಿಕ್ಷಕರ ಜೀವನವನ್ನು ಧನ್ಯ
ಗೊಳಿಸುವ ಇಂತಹ ರನ್ನಗಳು ಅಲ್ಲಲ್ಲಿ-
ಬಿರು ಬೇಸಗೆಯ ಬೈಗಿನಲ್ಲಿ
ಬೀಸುವ ಮಂದೆಲರು.
No comments:
Post a Comment